ತಂದೆ ಮಗ ಪರಿಶುದ್ದ ಆತ್ಮನೆ
ಆರಾಧನೆ ನಿನ್ನ ಆರಾಧನೆ
ಭೂಪರ ಲೋಕಗಳ ಒಡೆಯನೆ
ಆರಾಧನೆ ನಿನ್ನ ಆರಾಧನೆ
ಸ್ತೋತ್ರ ಮಾನ ಮಹಿಮೆಗೆ
ಯೋಗ್ಯನೆ ಆರಾಧನೆ ನಿನ್ನ ಆರಾಧನೆ
1.ಕ್ಷಮೆಯನ್ನು ಬೇಡಿ ಬರುವವರ
ಎಂದೆಂದಿಗೂ ನಿ ತಳ್ಳಿ ಬಿಡದೇ
ಶಾಶ್ವತ ರಕ್ಷಣೆ ನೀಡಿ
ಆಶ್ರಯ ಗಿರಿಯಾಗುವಿ
2.ದಯಾಪರನೆ ಕರುಣಾಕರನೆ
ಅಗಮ್ಯನೆ ಪರಮಪೂಜ್ಯನೆ
ನಿನ್ನನ್ನು ನಾ ಕಾಣುವ
ಕ್ರಪೆಯನ್ನು ದಯಪಾಲಿಸು
3.ಅಬ್ರಾಹಂ ಇಸಾಕ ಯಾಕೋಬ್ಯರ
ಮಹೋನ್ನತ ತ್ರಯೇಕ ದೇವರೆ
ಆದಿಯು ಅಂತ್ಯವು ನೀನೆ
ನಿನ್ನನ್ನೇ ಕೊಂಡಾಡುವೆ
No comments:
Post a Comment