Wednesday, January 31, 2018

ABRAHAMANA OO DEVARE KANNADA LYRICS

ಅಬ್ರಹಾಮನ ಓ ದೇವರೆ ನಿನೆಷ್ಟು ಒಳ್ಳೆಯವಾ
ಇಸಾಕನ ಓ ದೇವರೆ ನೀ ನನಗೆ ಹತ್ತಿರದವ (2)

ಹೆತ್ತ ತಾಯಿ ತನ್ನ ಮಗುವನು ಹೊತ್ತುಕೊಳ್ಳುವ ಹಾಗೆ
ಅನುದಿನವು ನನ್ನ ಭಾರವ ನೀ ಹೊತ್ತು ನಡೆದೆ (2)
ಒಂದು ಕ್ಷಣವೂ ನನ್ನ ಮರೆಯದಂತೆ
ತಂದೆ ತಾಯಿಗಿಂತ ಹೆಚ್ಚು ಪ್ರೀತಿ ಮಾಡಿರುವೆ (2)

ದೀನನನ್ನು ಧೂಳಿನಿಂದ ನೀ ಎತ್ತಿದೆ
ಧರಿಧ್ರನನ್ನು ತಿಪ್ಪೆಯಿಂದ ಮೇಲಕ್ಕೆತ್ತಿದೆ (2)
ಶ್ರೀಮಂತಿಕೆಯನ್ನು ನೀ ನೀಡಿದೆ
ಬಡತನವನ್ನೆಲ್ಲ ನೀನೆ ಆಳಿಸಿ ಹಾಕಿದೆ (2)

ಕಲ್ಲಿನಲ್ಲಿ ಹುಳುವನ್ನು ಇಟ್ಟವರು ನೀವೆ
ಅದರಲ್ಲಿ ಉಸಿರನ್ನು ಕೊಟ್ಟವರು ನೀವೆ (2)
ಎಷ್ಟೋಂದು ಉಪಕಾರ ನೀ ಮಾಡಿದೆ
ಎಲ್ಲವ ಹೇಳಲು ಸಾವಿರ ವರುಷವೆ ಸಾಲದೆ. (2)

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...